ಕೋಲ್ಕತಾ, ಜ.12 : ನಗರದ ಹೃದಯಭಾಗದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಏಳು ಮಹಡಿಯಲ್ಲಿನ 2500 ಅಂಗಡಿಗಳು ಮತ್ತು ಕೋಟ್ಯಂತರ ರು. ಆಸ್ತಿಪಾಸ್ತಿ ಆಹುತಿಯಾಗಿದೆ.ಜಮ್ನಾಲಾಲ್ ಬಜಾಜ್ ಬೀದಿಯಲ್ಲಿನ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಮನೆಯೊಂದರಲ್ಲಿ ಶನಿವಾರ ಬೆಳಗಿನ ಜಾವ ಎರಡು ಗಂಟೆಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಬದಿಯಲ್ಲಿದ್ದ ಬಹುಮಹಡಿಗೆ ಹಬ್ಬಿದೆ. 40 ಅಗ್ನಿಶಾಮಕ ದಳದ ವಾಹನಗಳು ಕಾರ್ಯತತ್ಪರವಾದರೂ ನೀರಿನ ಕೊರತೆ ಮತ್ತು ವಿದ್ಯುತ್ ವ್ಯತ್ಯಯದಿಂದ ಹೆಚ್ಚಿನ ಹಾನಿ ಸಂಭವಿಸಿದೆ.ಎರಡು ಸಾವಿರ ಅಂಗಡಿಮುಂಗಟ್ಟುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಆದರೆ, ಯಾವುದೇ ಸಾವುನೋವು ಸಂಭವಿಸಿದ ವರದಿ ಬಂದಿಲ್ಲ. ಸಂಕೀರ್ಣದಲ್ಲಿ ಜವಳಿ ಮತ್ತು ಟಾರ್ಪಾಲಿನ್ ಅಂಗಡಿಗಳು ಹೆಚ್ಚಿಗೆ ಇದ್ದಿದ್ದರಿಂದ ಭುಗಿಲೆದ್ದ ಬೆಂಕಿ ಒಂದರಿಂದ ಒಂದು ಅಂಗಡಿಗೆ ಹಬ್ಬಿದೆ.ಆಸ್ತಿಪಾಸ್ತಿ ನಷ್ಟ ಕೋಟಿಗೆ ಹತ್ತಿರ ಅಂತ ಅಂದಾಜು ಮಾಡಲಾಗಿದೆ. ರಾಜ್ಯ ಸರ್ಕಾರ ಘಟನೆಯ ತನಿಖೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.(ಏಜೆನ್ಸಿಯಿಂದ)
No hay comentarios:
Publicar un comentario